ಶ್ರೀ ಹುಲಿಗೆಮ್ಮನ ಪಾದದಡಿಗೆ ಬಂದಳು ತುಂಗಭದ್ರೆ, ದೃಶ್ಯ ನೋಡಲು ಬರ್ತಿದೆ ಜನರ ದಂಡು! - kannada news
ತುಂಗಭದ್ರಾ ಜಲಾಶಯದಿಂದ ಅಪಾರ ಪ್ರಮಾಣದಲ್ಲಿ ನದಿಗೆ ನೀರು ಹರಿಬಿಡಲಾಗಿದೆ. ತಾಲೂಕಿನ ಹುಲಗಿ ಗ್ರಾಮದ ಶ್ರೀ ಹುಲಿಗೆಮ್ಮದೇವಿ ದೇವಸ್ಥಾನದ ಬಳಿ ಹರಿಯುತ್ತಿರುವ ತುಂಗಭದ್ರಾ ನದಿಯ ರುದ್ರ ರಮಣೀಯ ದೃಶ್ಯವನ್ನು ಅಪಾಯ ಲೆಕ್ಕಿಸದೆ ಮಹಿಳೆಯರು, ಮಕ್ಕಳು ಬಂದು ನೋಡುತ್ತಿದ್ದಾರೆ. ನದಿಯ ನೀರು ದೇವಸ್ಥಾನದ ಪಾದಗಟ್ಟೆಗೆ ಬಂದಿದೆ. ನದಿ ದಂಡೆಯಲ್ಲಿರುವ ಕೆಲ ಅಂಗಡಿಗಳಿಗೆ ನೀರು ನುಗ್ಗಿದೆ. ನೀರು ಹೆಚ್ಚಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ನದಿ ದಂಡೆಯಲ್ಲಿರುವ ತಮ್ಮ ಅಂಗಡಿಗಳಿಂದ ವಸ್ತುಗಳನ್ನು ಶಿಫ್ಟ್ ಮಾಡುತ್ತಿದ್ದಾರೆ.