ಆಯುಧಪೂಜೆ,ವಿಜಯದಶಮಿ.. ಸಾಲು ಸಾಲು ಸರ್ಕಾರಿ ರಜೆ; ನೆಲಮಂಗಲದಲ್ಲಿ ಟ್ರಾಫಿಕ್ ಜಾಮ್ - ಟೋಲ್ ಬಳಿ ವಾಹನದಟ್ಟಣೆ
ನೆಲಮಂಗಲ : ಸಾಲು ಸಾಲು ಸರ್ಕಾರಿ ರಜೆ ಹಿನ್ನೆಲೆ ಟ್ರಾಫಿಕ್ ಜಾಮ್ನಲ್ಲಿ ಸಿಲುಕಿ ವಾಹನ ಸವಾರರು ಪರದಾಡುವಂತಾಗಿದೆ. ಬೆಂಗಳೂರಿನ ನೆಲಮಂಗಲದ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಸಂಚಾರ ದಟ್ಟನೆ ಉಂಟಾಗಿದ್ದು, ಪ್ರಯಾಣಿಕರು ಹೈರಾಣಾಗಿದ್ದಾರೆ. ಭಾನುವಾರದ ರಜೆ ಜೊತೆಗೆ ಆಯುಧಪೂಜೆ, ವಿಜಯದಶಮಿ ಹಬ್ಬಗಳು ಸಾಲಾಗಿ ಬಂದಿರುವುದರಿಂದ ಇಂದು ನಗರದಿಂದ ಜನರು ತಮ್ಮೂರುಗಳಿಗೆ ಹೊರಟ್ಟಿದ್ದಾರೆ. ಪರಿಣಾಮ ನೆಲಮಂಗಲದ ನವಯುಗ ಮತ್ತು ಜಾಸ್ ಟೋಲ್ ಬಳಿ ವಾಹನದಟ್ಟಣೆ ಉಂಟಾಗಿದೆ.