ಬೀದರ್ ಜಿಲ್ಲೆಯ ಹಲವೆಡೆ ಧಾರಾಕಾರ ಮಳೆ: ಜಮೀನುಗಳಿಗೆ ನುಗ್ಗಿದ ನೀರು
ಬೀದರ್: ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಮಳೆ ಆರ್ಭಟದಿಂದ ಕೆರೆ - ಕಟ್ಟೆಗಳು ತುಂಬಿರುವ ಪರಿಣಾಮದಿಂದಾಗಿ ಸಾವಿರಾರು ಎಕರೆ ಪ್ರದೇಶದ ಹೊಲ - ಗದ್ದೆಗಳಿಗೆ ನೀರು ನುಗ್ಗಿದೆ. ಮಳೆ ಹೊಡೆತಕ್ಕೆ 300ಕ್ಕೂ ಅಧಿಕ ಮನೆಗಳ ಗೋಡೆಗಳು ಕುಸಿದಿವೆ. ನಾಲ್ವರು ಮೃತಪಟ್ಟ ವರದಿಯಾಗಿದೆ. ಕಟಾವಿಗೆ ಬಂದ ಸೋಯಾಬೀನ್, ಉದ್ದು, ಹೆಸರು, ಕಬ್ಬು, ತೊಗರಿ ಸೇರಿದಂತೆ ಎಲ್ಲ ಮುಂಗಾರು ಬೆಳೆಗಳು ಜಲಾವೃತಗೊಂಡಿವೆ. ಮಾಂಜ್ರಾ ನದಿ ತುಂಬಿ ಹರಿಯುತ್ತಿದ್ದು ನದಿ ತಟದ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಿಸಿದೆ. ಈ ಕುರಿತು 'ಈಟಿವಿ ಭಾರತ' ಪ್ರತಿನಿಧಿ ಪ್ರತ್ಯಕ್ಷ ವರದಿ ನೀಡಿದ್ದಾರೆ.