ವಿಜಯಪುರದಲ್ಲಿ ಭಾರೀ ಮಳೆ: ಅಪಾಯ ಮಟ್ಟ ಮೀರಿ ಹರಿಯುತ್ತಿದೆ ಡೋಣಿ ನದಿ - ಡೋಣಿ ನದಿ ಸೇತುವೆ ಮುಳುಗಡೆ
ವಿಜಯಪುರ ಜಿಲ್ಲೆಯಲ್ಲಿ ಕಳೆದ ಹಲವು ದಿನಗಳಿಂದ ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದ ಡೋಣಿ ನದಿ ತುಂಬಿ ಹರಿಯುತ್ತಿದೆ. ತಾಳಿಕೋಟೆ ಪಟ್ಟಣದ ಬಳಿಯ ಡೋಣಿ ನದಿಯ ಸೇತುವೆ ಜಲಾವೃತವಾಗಿದೆ. ಅಪಾಯ ಲೆಕ್ಕಿಸದೆ ಸೇತುವೆ ಮೇಲೆ ಜನರು ಸಂಚರಿಸುತ್ತಿದ್ದಾರೆ. ತುಂಬಿ ಹರಿಯುತ್ತಿರುವ ಸೇತುವೆಯನ್ನು ದಾಟುವ ವೇಳೆ ಸ್ವಲ್ಪ ಆಯ ತಪ್ಪಿದರೂ ಜನರು ನದಿ ಪಾಲಾಗುವ ಸಾಧ್ಯತೆ ಇದೆ. ಸೇತುವೆ ಮುಳುಗಿದ ಕಾರಣ ಕೆಲ ಗ್ರಾಮಗಳ ಸಂಪರ್ಕ ಬಂದ್ ಆಗಿದೆ. ಹಡಗಿನಾಳ, ಶಿವಪುರ, ಮೂಕಿಹಾಳ, ನಾಗೂರು, ಹರನಾಳ, ಕಲ್ಲದೇನಹಳ್ಳಿ, ಹಗರಗೊಂಡ ಸಂಪರ್ಕ ಬಂದ ಆಗಿದೆ. ತಾಳಿಕೋಟೆ ಪಟ್ಟಣದ ಸಂಪರ್ಕ ಸಹ ಸ್ಥಗಿತಗೊಂಡಿದೆ.