ಕರ್ನಾಟಕ

karnataka

ETV Bharat / videos

ಮಲೆನಾಡಲ್ಲಿ ಮುಂಗಾರು ಮಳೆಯಬ್ಬರದ್ದೇ ಮಾತು, ಜನ ಹೈರಾಣ: ಪ್ರತ್ಯಕ್ಷ ವರದಿ - ಆಶ್ಲೇಷ ಮಳೆ

By

Published : Aug 7, 2020, 8:06 PM IST

ಶಿವಮೊಗ್ಗ: ಕಳೆದ ನಾಲ್ಕು ದಿನಗಳಿಂದ ಮಲೆನಾಡಿನಲ್ಲಿ ವರುಣ ಅಬ್ಬರಿಸುತ್ತಿದ್ದಾನೆ.‌ ಆಶ್ಲೇಷ ಮಳೆಯಿಂದಾಗಿ ನದಿ- ಹಳ್ಳಗಳನ್ನು‌ ಉಕ್ಕಿ ಹರಿಯುತ್ತಿದ್ದು, ಅನೇಕ ಅನಾಹುತಗಳು ನಡೆದಿವೆ. ತುಂಗಾ ಜಲಾಶಯಕ್ಕೆ ಸದ್ಯ 80 ಸಾವಿರ‌ ಕ್ಯೂಸೆಕ್ ಒಳ ಹರಿವಿದೆ. ಜಲಾಶಯದಿಂದ ಹೊರಹರಿವು ಕೂಡಾ‌ ಅಷ್ಟೇ ಇದೆ. ಕಳೆದ ಮೂರು ದಿನಗಳಿಂದ ಭದ್ರಾ ಜಲಾಶಯಕ್ಕೆ ಪ್ರತಿ ದಿನ 3 ಅಡಿಗಳಷ್ಟು ನೀರು ಹರಿದು ಬರುತ್ತಿದೆ. ಇಲ್ಲಿಗೆ‌ 57 ಸಾವಿರ‌ ಕ್ಯೂಸೆಕ್ ನಷ್ಟು ನೀರಿನ ಒಳಹರಿವಿದೆ. ಇಲ್ಲಿನ ಎರಡು ನಾಲೆಗಳಿಗೆ 2.189 ಕ್ಯೂಸೆಕ್ ನಷ್ಟು ನೀರನ್ನು ಹೊರ ಬಿಡಲಾಗುತ್ತಿದೆ. ಲಿಂಗನಮಕ್ಕಿ ಜಲಾಶಯಕ್ಕೆ 72 ಸಾವಿರ ಕ್ಯೊಸೆಕ್ ನೀರಿನ ಒಳ ಹರಿವಿದೆ.

ABOUT THE AUTHOR

...view details