ಸವದತ್ತಿಯಲ್ಲಿ ಭಾರೀ ಮಳೆ: ಯಲ್ಲಮ್ಮನ ಗುಡ್ಡದ ಎಣ್ಣೆ ಹೊಂಡಕ್ಕೆ ನುಗ್ಗಿದ ನೀರು! - ಯಲ್ಲಮ್ಮನಗುಡ್ಡದ ಎಣ್ಣೆ ಹೊಂಡಕ್ಕೆ ನುಗ್ಗಿದ ನೀರು
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನಲ್ಲಿ ನಿನ್ನೆ ಸಂಜೆ ಸುರಿದ ಧಾರಾಕಾರ ಮಳೆಗೆ ಯಲ್ಲಮ್ಮನ ಗುಡ್ಡದ ಎಣ್ಣೆ ಹೊಂಡಕ್ಕೆ ನೀರು ನುಗ್ಗಿದೆ. ಎಣ್ಣೆ ಹೊಂಡದಲ್ಲಿ ಅಪಾರ ಪ್ರಮಾಣದಲ್ಲಿ ಮಳೆ ನೀರು ಹರಿಯುತ್ತಿದೆ. ಸವದತ್ತಿಯ ರೇಣುಕಾದೇವಿ ದೇವಸ್ಥಾನದ ಪಕ್ಕದಲ್ಲೇ ಎಣ್ಣೆ ಹೊಂಡ ಇದೆ. ದೇವಸ್ಥಾನಕ್ಕೆ ಭೇಟಿ ನೀಡುವ ಪ್ರತೀ ಭಕ್ತರು ಈ ಹೊಂಡದಲ್ಲಿ ಸ್ನಾನ ಮಾಡುತ್ತಾರೆ. ಈ ಹೊಂಡದಲ್ಲಿ ಸ್ನಾನ ಮಾಡಿದ್ರೆ ಪಾಪಗಳು ದೂರ ಆಗುತ್ತವೆ ಎಂಬುದು ನಂಬಿಕೆ. ಎಣ್ಣೆ ಹೊಂಡದ ನೀರು ರೇಣುಕಾ ದೇವಿ ದೇವಸ್ಥಾನಕ್ಕೆ ನುಗ್ಗಿಲ್ಲ. ಆದ್ರೆ ಎಣ್ಣೆ ಹೊಂಡದ ಮೂಲಕ ಮಳೆ ನೀರು ಕಾಲುವೆಯತ್ತ ಹರಿಯುತ್ತಿದೆ.