ಬಿಸಿಲುನಾಡಿನಲ್ಲಿ ವರುಣನ ಆರ್ಭಟ: ಕೊಚ್ಚಿ ಹೊದ ರಸ್ತೆ, ಸೇತುವೆ - Roads and bridges washed away
ರಾಯಚೂರು ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಮಾನವಿ ತಾಲೂಕಿನ ಶಾಖಾಪೂರು, ಗಣದಿನ್ನಿ-ಭಾಗ್ಯನಗರ ಕ್ಯಾಂಪಿನ ಮೂಲಕ ಲಕ್ಕಂದಿನ್ನಿಗೆ ಸಂಪರ್ಕ ಕಲ್ಪಿಸುವ ರಸ್ತೆ, ನಿನ್ನೆ ರಾತ್ರಿ ಕೊಚ್ಚಿ ಹೋಗಿದೆ. ಸಿಂಧನೂರು ತಾಲೂಕಿನ ಧಡೆಸೂಗೂರು ಗ್ರಾಮದಿಂದ ಹುಲುಗುಂದ ಗ್ರಾಮಕ್ಕೆ ಸಂಪರ್ಕವಿರುವ ರಾಜ್ಯ ಹೆದ್ದಾರಿ ಮೇಲೆ ಸೇತುವೆ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ತಾತ್ಕಾಲಿಕವಾಗಿ ನಿರ್ಮಿಸಲಾಗಿದ್ದ ಸೇತುವೆಯೂ ಕೊಚ್ಚಿ ಹೋಗಿ ಸಂಪರ್ಕ ಕಡಿತಗೊಂಡಿದೆ.