ಹತ್ತು ವರ್ಷಗಳ ಬಳಿಕ ಬರದ ನಾಡಿನಲ್ಲಿ ಭರ್ಜರಿ ಮಳೆ - ಮೊಳಕಾಲ್ಮೂರು ಮಳೆ ಸುದ್ದಿ
ಬರದ ನಾಡು ಎಂದು ಹಣೆಪಟ್ಟಿ ಕಟ್ಟಿಕೊಂಡಿರುವ ಚಿತ್ರದುರ್ಗ ಜಿಲ್ಲೆಯಲ್ಲಿ ಸತತ 10 ವರ್ಷಗಳಿಂದ ಹನಿ ಮಳೆ ಇಲ್ಲದೇ ಜಿಲ್ಲೆಯ ರೈತರು ಹೈರಾಣಾಗಿದ್ರು. ಆದ್ರೇ ಕಳೆದ ಮೂರು ದಿನಗಳ ಕಾಲ ಸುರಿದ ಕುಂಭ ದ್ರೋಣ ಮಳೆಗೆ ಬತ್ತಿಹೋಗಿದ್ದ ಹಳ್ಳಕೊಳ್ಳಗಳು ತುಂಬಿದ್ದು, ರೈತರ ಮೊಗದಲ್ಲಿ ಮಂದಹಾಸ ಮನೆ ಮಾಡಿದೆ.