ಕೋಟೆನಾಡಲ್ಲಿ ಆಲಿಕಲ್ಲು ಸಮೇತ ವರ್ಷಧಾರೆ, ಜನರ ಮೊಗದಲ್ಲಿ ಹರ್ಷ - undefined
ಚಿತ್ರದುರ್ಗ: ಕೆಂಡದಂತಹ ಬಿಸಿಲಿನಿಂದ ಹೈರಾಣಾಗಿದ್ದ ಕೋಟೆನಾಡಿಗೆ ಇಂದು ವರುಣ ತಂಪೆರೆದಿದ್ದಾನೆ. ಯುಗಾದಿ ನಂತರ ಆಗಮಿಸಿದ ಮೊದಲ ಮಳೆ ಇದಾಗಿದ್ದು, ಜನರು ನಿಟ್ಟುಸಿರು ಬಿಡುವಂತಾಯಿತು. ಸತತ ಅರ್ಧ ಗಂಟೆಗೂ ಹೆಚ್ಚು ಕಾಲ ಬಿಡದೆ ಮಳೆ ಸುರಿದ ಕಾರಣ ಸಾರ್ವಜನಿಕರು ಮನೆಗೆ ತೆರಳಲು ಕೆಲಕಾಲ ಪರದಾಡುವಂತಾದ್ರೆ, ಮಳೆಯಿಲ್ಲದೆ ಕಂಗಾಲಾಗಿದ್ದ ರೈತರ ಮೊಗದಲ್ಲಿ ಮಂದಹಾಸ ಮೂಡಿತು.