ಚಾಮರಾಜನಗರ ಜಿಲ್ಲಾದ್ಯಂತ ಮಳೆ: ತಂಪಾದ ಇಳೆ - Heavy rainfall in Chamarajnagar district news
ಚಾಮರಾಜನಗರ: ಗುಡುಗು ಸಿಡಿಲ ಆರ್ಭಟವಿಲ್ಲದೇ ಜಿಲ್ಲಾದ್ಯಂತ ಬಿರುಸಾದ ಮಳೆಯಾಗಿದ್ದು, ಇಳೆ ತಂಪಾಗಿದೆ. ಜಿಲ್ಲಾ ಕೇಂದ್ರ, ಹನೂರು, ಕೊಳ್ಳೇಗಾಲ, ಯಳಂದೂರು ಹಾಗೂ ಗುಂಡ್ಲುಪೇಟೆ ಸೇರಿದಂತೆ ಚಾಮರಾಜನಗರ ಜಿಲ್ಲೆಯ ಬಹುತೇಕ ಕಡೆ ಬೆಳಗ್ಗೆಯಿಂದ ಧಾರಾಕಾರ ಮಳೆಯಾಗಿದೆ ಮುಸುಕಿನ ಜೋಳ ಮತ್ತು ಭತ್ತಕ್ಕೆ ನೀರಿನ ಅವಶ್ಯಕತೆ ಇದ್ದು, ಭೂಮಿ ಹದಗೊಳಿಸಿ ಹುರುಳಿ ಬಿತ್ತನೆಗೆ ರೈತರು ಅಣಿಯಾಗಿದ್ದಾರೆ. ಇನ್ನು, ಮಳೆ ಬಂದಿದ್ದರಿಂದ ರಸ್ತೆಗಳು ಹದಗೆಟ್ಡಿದ್ದು, ವಾಹನ ಸವಾರರು ಪರದಾಡುವಂತಾಯಿತು.
TAGGED:
Chamarajnagar rain news