ಮಾಂಜ್ರಾ ನದಿಯಲ್ಲಿ ಹರಿದು ಬಂದ ಎರಡು ಸೋಯಾಬಿನ್ ಬಣಿವೆ...! - ಮಾಂಜ್ರಾ ನದಿಯಲ್ಲಿ ಹರಿದು ಬಂದ ಸೋಯಾಬಿನ್
ಬೀದರ್: ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಮಾಂಜ್ರಾ ನದಿ ಉಕ್ಕಿ ಹರಿಯುತ್ತಿದ್ದು, ನದಿಯೊಡಲಿನಲ್ಲಿ ಎರಡು ಸೋಯಾಬಿನ್ ಬಣಿವೆಗಳು ಹರಿದುಕೊಂಡು ಹೋಗುವುದು ಕಂಡು ಬಂದಿದೆ. ಜಿಲ್ಲೆಯ ಭಾಲ್ಕಿ ತಾಲೂಕಿನ ನಿಟ್ಟೂರ ಗ್ರಾಮದ ಬಳಿಯ ಮಾಂಜ್ರಾ ನದಿಯಲ್ಲಿ ಮಹಾರಾಷ್ಟ್ರದಿಂದ ಹರಿದು ಬಂದ ಎರಡು ಸೋಯಾಬಿನ್ ಬಣಿವೆಗಳು ಕಂಡು ಸ್ಥಳೀಯರು ದಂಗಾಗಿ ಹೋಗಿದ್ದಾರೆ. ಸುಮಾರು 20 ಚೀಲದ ಒಂದು 10 ಚೀಲದ ಮತ್ತೊಂದು ಬಣಿವೆ ನೀರಿನಲ್ಲಿ ತೇಲಾಡುತ್ತ ಹರಿದು ಬಂದಿದೆ.