ಬೆಂಗಳೂರಿಗೆ ದಿಢೀರ್ ಮಳೆರಾಯನ ಆಗಮನ: ಬಿಸಿಲಲ್ಲಿ ಬಸವಳಿದ ಜನರಿಗೆ ತಂಪಿನ ಸಿಂಚನ - ಜಯನಗರದಲ್ಲಿ ಮಳೆ
ಬೇಸಿಗೆ ಆರಂಭಕ್ಕೆ ಮುಂಚೆ ಬೆಂಗಳೂರಿನಲ್ಲಿ ಬಿಸಿಲಿನ ಬೇಗೆ ಹೆಚ್ಚಾಗಿದ್ದು, ಬಿಸಿಲಿನಿಂದ ಬೆಂದು ಹೋಗಿದ್ದ ಬೆಂದಕಾಳೂರಿಗೆ ಮಳೆರಾಯ ತಂಪೆರೆದಿದ್ದಾನೆ. ಜಯನಗರ, ಕಾರ್ಪೊರೇಷನ್, ವಿಧಾನಸೌಧ, ಎಚ್. ಎಸ್. ಆರ್ ಲೇಔಟ್ ಹಾಗೂ ಮೆಜೆಸ್ಟಿಕ್ ಸುತ್ತಮುತ್ತ ಮಳೆ ಬಿದ್ದಿದೆ. ಇನ್ನು ದಿಢೀರ್ ಅಂತ ಬಂದ ಮಳೆಯಿಂದ ವಾಹನ ಸವಾರರಿಗೆ ಕೊಂಚ ಕಿರಿಕಿರಿ ಎನಿಸಿದರೂ ಬಿಸಿಲಿನಿಂದ ಕಂಗೆಟ್ಟಿದ್ದ ಮಂದಿಗೆ ತುಸು ನೆಮ್ಮದಿಯಾಗಿದೆ.