ಹಾವೇರಿಯಲ್ಲಿ ಗುಡುಗು ಸಹಿತ ಭಾರಿ ಮಳೆ; ರೈತಾಪಿ ವರ್ಗದಲ್ಲಿ ಖುಷಿ - ರೈತರ ಮೊಗದಲ್ಲಿ ಮಂದಹಾಸ
ಹಾವೇರಿ ಜಿಲ್ಲೆಯ ವಿವಿಧೆಡೆ ಗುರುವಾರ ಧಾರಾಕಾರ ಮಳೆಯಾಗಿದೆ. ನಗರದಲ್ಲಿಅರ್ಧ ಗಂಟೆಗೂ ಅಧಿಕ ಕಾಲ ವರುಣ ಆರ್ಭಟಿಸಿದ್ದು ರಸ್ತೆ ಮೇಲೆಲ್ಲಾ ನೀರು ಹರಿದ ಪರಿಣಾಮ ಪಾದಚಾರಿಗಳು ಪರದಾಡುವಂತಾಗಿತ್ತು. ಕೆಲ ದಿನಗಳಿಂದ ವಿಶ್ರಾಂತಿ ಪಡೆದಿದ್ದ ಮಳೆರಾಯನ ಆಗಮನದಿಂದಾಗಿ ರೈತರ ವರ್ಗದಲ್ಲಿ ಸಂತಸ ಮನೆ ಮಾಡಿದೆ.