ಇವರ ಗೋಳು ಕೇಳೋರ್ಯಾರು? ಬೇಕಿದೆ ಸೂಕ್ತ ನೆರವಿನ ಹಸ್ತ!
ಕೊಡಗು: ಮನೆ ತುಂಬೆಲ್ಲಾ ನೀರು, ಉಟ್ಟ ಬಟ್ಟೆಯಲ್ಲೇ ಮನೆ-ಮಠ ಬಿಟ್ಟು ಬಂದಿದ್ದೇವೆ. ನಮ್ಮ ಸ್ಥಿತಿಗೆ ಶಾಶ್ವತ ಪರಿಹಾರ ಸಿಗೋದು ಯಾವಾಗ. ಮಳೆ ಕಡಿಮೆ ಆಗುವವರೆಗೂ ನಾಲ್ಕು ಕೆ.ಜಿ. ಅಕ್ಕಿ, ಬೇಳೆ, ಸೋಪು, ಮಲಗಲು ಹೊದಿಕೆ ಕೊಟ್ಟು ಕಳುಹಿಸ್ತಾರೆ. ಹೀಗೆ ಅಳಲು ತೋಡಿಕೊಳ್ಳುತ್ತಿದ್ದಾರೆ ನದಿ ಪಾತ್ರ ಜಲಾವೃತವಾಗಿ ನಿರಾಶ್ರಿರಾಗಿರುವ ಜನರು. ಇದು ಕೊಡಗು ಜಿಲ್ಲೆಯ ಕಾವೇರಿ ನದಿ ಪಾತ್ರದ ಜನರ ಅಸಹಾಯಕತೆ.