ಬಸ್ ನಿಲ್ದಾಣ ಕೊಟ್ಟಿಗೆ ಮಾಡ್ಕೊಂಡು ಹಾಲು ಕರೆದ ನಾರಿ.. ನೆರೆ ಬಂದ್ರೇ ಇನ್ನೇನ್ ಮಾಡ್ತಾರೆ - ಬಸ್ ನಿಲ್ದಾನದಲ್ಲಿ ಹಾಲು ಕರೆದ ಮಹಿಳೆ
ಭಾರಿ ಮಳೆಗೆ ಉಡುಪಿ ಜಿಲ್ಲೆಯ ಉದ್ಯಾವರದ ಸೇತುವೆ ಹತ್ತಿರದ ಮನೆಗಳ ಸುತ್ತಲೂ ನೀರು ಆವರಿಸಿಕೊಂಡು ನಡುಗಡ್ಡೆಯಂತಾಗಿದೆ. ಇದರಿಂದ ಬಸ್ ತಂಗುದಾಣವೇ ದನ ಕರುಗಳಿಗೆ ಆಶ್ರಯ ತಾಣವಾಗಿದೆ. ಮಹಿಳೆಯೊಬ್ಬಳು ಬಸ್ ತಂಗುದಾಣದಲ್ಲಿ ಹಾಲು ಕರೆಯುತ್ತಿರುವ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದ್ದು ಅಲ್ಲಿನ ವಾಸ್ತವ ಸ್ಥಿತಿ ತಿಳಿಸುವಂತಿದೆ.