ಕೊಡಗಿನ ಹಲವೆಡೆ ಧಾರಾಕಾರ ಮಳೆ... ತುಂಬಿ ಹರಿಯುತ್ತಿರುವ ನದಿ-ತೊರೆಗಳು - undefined
ಕಳೆದ ವರ್ಷ ವರುಣನ ಅವಾಂತರದಿಂದ ನಲುಗಿದ್ದ ಕೊಡಗಿನಲ್ಲಿ, ಮತ್ತೆ ವರ್ಷಧಾರೆ ಆರಂಭಗೊಂಡಿದೆ. ನಿನ್ನೆ ಬಿಡುವು ಕೊಟ್ಟಿದ್ದ ಮಳೆರಾಯ ಇಂದು ಬೆಳಗ್ಗೆಯಿಂದ ಪುನಃ ಅಬ್ಬರಿಸುತ್ತಿದ್ದಾನೆ. ಸೋಮವಾರಪೇಟೆ, ಭಾಗಮಂಡಲ, ನಾಪೋಕ್ಲು ಸೇರಿದಂತೆ ಹಲವೆಡೆ ಧಾರಾಕಾರ ಮಳೆಯಾಗುತ್ತಿದೆ. ಬ್ರಹ್ಮಗಿರಿ, ಪುಷ್ಪಗಿರಿ ತಪ್ಪಲಲ್ಲಿ ಎಡೆಬಿಡದೆ ಸುರಿದ ಮಳೆಯಿಂದ ನದಿ-ತೊರೆಗಳು ತುಂಬಿ ಹರಿಯುತ್ತಿವೆ.