ಕರ್ನಾಟಕ

karnataka

ETV Bharat / videos

ಸುತ್ತಾ ಸೇತುವೆ ಮೇಲೆ ಹರಿದ ಶರಾವತಿ: 20 ಗ್ರಾಮಗಳ ಸಂಪರ್ಕ ಕಟ್​ - ಮಾಜಿ ಸಚಿವ ಕಾಗೋಡು ತಿಮ್ಮಪ್ಫ ಭೇಟಿ

🎬 Watch Now: Feature Video

By

Published : Sep 5, 2019, 5:25 PM IST

ಕಳೆದ ಒಂದು ವಾರದಿಂದ ಜಿಲ್ಲೆಯ ಹೊಸನಗರ, ತೀರ್ಥಹಳ್ಳಿ ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಶರಾವತಿ ನದಿ ತುಂಬಿ ಹರಿಯುತ್ತಿದ್ದಾಳೆ. ನದಿ ತುಂಬಿ ಹರಿಯುತ್ತಿರುವ ಪರಿಣಾಮ ಹೊಸನಗರ ತಾಲೂಕು ಸುತ್ತಾ ಸೇತುವೆ ಮೇಲೆ ನೀರು ಹರಿಯುತ್ತಿದೆ. ಇದರಿಂದಾಗಿ ನಗರ ಭಾಗಕ್ಕೆ 20 ಗ್ರಾಮಗಳು ಸಂಪರ್ಕ ಕಳೆದು ಕೊಂಡಿವೆ. ಇದರಲ್ಲಿ ಸುತ್ತಾ, ಮಳಲಿ, ಬಾಳೆಕೊಪ್ಪ, ಮೆಣಸೆಕಟ್ಟೆ, ಏರಗಿ, ಟಂಕೆಬೈಲು ಸೇರಿದಂತೆ ಹಲವು ಗ್ರಾಮಗಳು ಸಂಪರ್ಕ ಕಳೆದುಕೊಂಡಿದ್ದು. ಸ್ಥಳಕ್ಕೆ ಇಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಭೇಟಿ ನೀಡಿ, ಪರಿಶೀಲಿಸಿದರು. ಈ ವೇಳೆ ಸರ್ಕಾರದ ಬೆನ್ನಿಗೆ ಬಿದ್ದು ಕೆಲಸ ಮಾಡಿಸುವುದಾಗಿ ಹೇಳಿದ್ರು.

ABOUT THE AUTHOR

...view details