ಮಳೆರಾಯನ ಆಟಕ್ಕೆ ನಲುಗಿಹೋದ ಬಿಸಿಲನಾಡು.. ಜನಜೀವನ ಅಸ್ತವ್ಯಸ್ತ - sedam rain lives are chaotic
ಸೇಡಂ: ತಾಲೂಕಿನಾದ್ಯಂತ ರಾತ್ರಿಯಿಡೀ ಸುರಿದ ಧಾರಾಕಾರ ಮಳೆಯಿಂದ ಪಟ್ಟಣದ ಮುಖ್ಯರಸ್ತೆ, ರೈಲು ನಿಲ್ದಾಣ ಸೇರಿದಂತೆ ಪೊಲೀಸ್ ಠಾಣೆ, ಎಸಿ ಕಚೇರಿಯಲ್ಲಿ ನೀರು ಜಮಾವಣೆಯಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಮಳಖೇಡದ ಉತ್ತರಾಧಿ ಮಠಕ್ಕೂ ನದಿ ನೀರು ನುಗ್ಗಿ ಜಯತೀರ್ಥರ ಮೂಲ ವೃಂದಾವನ ನೀರಿನಿಂದ ಜಲಾವೃತವಾಗಿದೆ. ರಾಜ್ಯ ಹೆದ್ದಾರಿ ಸಂಪರ್ಕ ಕಡಿತಗೊಂಡಿದ್ದು, ಕಲಬುರಗಿ, ಸೇಡಂ, ಹೈದರಾಬಾದ್ ಮಾರ್ಗ ಬಂದ್ ಮಾಡಲಾಗಿದೆ.