ಧಾರಾಕಾರ ಮಳೆಗೆ ನಲುಗಿದ ಮೂಡಿಗೆರೆ... ತ್ವರಿತ ಗತಿಯಲ್ಲಿ ಘಾಟಿ ರಸ್ತೆ ತೆರವು ಕಾಮಗಾರಿ
ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಸತತ ಒಂದು ವಾರ ಕಾಲ ಸುರಿದಿದ್ದ ಧಾರಾಕಾರ ಮಳೆಗೆ ಮೂಡಿಗೆರೆ ತಾಲೂಕು ನಲುಗಿತ್ತು. ವರುಣನ ಆರ್ಭಟಕ್ಕೆ ಚಾರ್ಮಾಡಿ ಘಾಟಿ ಸೇರಿದಂತೆ ಹತ್ತಾರು ಪ್ರದೇಶಗಳಲ್ಲಿ ಗುಡ್ಡ ಹಾಗೂ ಭೂ ಕುಸಿತ ಉಂಟಾಗಿ ರಸ್ತೆ ಸಂಪರ್ಕವೇ ಸಂಪೂರ್ಣ ಬಂದ್ ಆಗಿತ್ತು. ಚಾರ್ಮಾಡಿ ಘಾಟಿ ಮಂಗಳೂರು, ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದೆ. ಸದ್ಯ ರಸ್ತೆಗಳನ್ನು ದುರಸ್ತಿ ಮಾಡುವ ಕೆಲಸ ತ್ವರಿತ ಗತಿಯಲ್ಲಿ ಸಾಗಿದೆ. ಚಾರ್ಮಾಡಿ ಘಾಟಿಯ ಇಕ್ಕೆಲಗಳಲ್ಲಿ ಚರಂಡಿ ಹಾಗೂ ರಸ್ತೆಯನ್ನು ರಿಪೇರಿ ಕಾಮಗಾರಿ ನಡೆಯುತ್ತಿದೆ.
Last Updated : Aug 20, 2019, 5:03 PM IST