ಮಲೆನಾಡಲ್ಲಿ ಮತ್ತೆ ಜೋರಾಯ್ತು ಮಳೆ..! - ಬಣಕಲ್,ಕೊಟ್ಟಿಗೆಹಾರ, ಚಾರ್ಮಾಡಿ ಘಾಟಿ ಯಲ್ಲಿ ಆತಂಕ
ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸುರಿದ ಮಳೆಯಿಂದ ಹಲವಾರು ಅವಾಂತರಗಳು ಸೃಷ್ಟಿಯಾಗಿದ್ದು, ಇದೀಗ ಒಂದು ಗಂಟೆಯಿಂದ ಮತ್ತೆ ಮಳೆ ಪ್ರಾರಂಭ ಆಗಿರುವುದರಿಂದಾಗಿ ಮಲೆನಾಡು ಜನರು ಇದನ್ನು ನೋಡಿ ಹೆದರುವಂತಹ ಪರಿಸ್ಥಿತಿ ನಿರ್ಮಾಣ ಆಗಿದೆ. ಜಿಲ್ಲೆಯ ಬಣಕಲ್,ಕೊಟ್ಟಿಗೆಹಾರ, ಚಾರ್ಮಾಡಿ ಘಾಟ್, ಜಾವಳಿ, ಕುದುರೆ ಮುಖ ಭಾಗದಲ್ಲಿ ಮಳೆ ಪ್ರಾರಂಭ ಆಗಿದ್ದು ಮಲೆನಾಡಿನ ಜನರು ಈ ಮಳೆಯನ್ನು ನೋಡಿ ಆತಂಕಕ್ಕೀಡಾಗಿದ್ದಾರೆ.