ಸಕ್ಕರೆ ನಾಡಲ್ಲಿ ವರುಣನ ಆರ್ಭಟ: ಮನೆ ಕುಸಿತ - ಮಂಡ್ಯ ಮನೆ ಕುಸಿತ ಸುದ್ದಿ
ಮಂಡ್ಯ: ಕೆ.ಆರ್.ಪೇಟೆ ತಾಲೂಕಿನಲ್ಲಿ ಮೊನ್ನೆ ಸುರಿದ ಮಳೆಯಿಂದಾಗಿ ಮನೆ ಕುಸಿದ ಘಟನೆ ಕಿಕ್ಕೇರಿ ಸಮೀಪದ ಉದ್ದಿನಮಲ್ಲ ಹೊಸೂರು ಗ್ರಾಮದಲ್ಲಿ ನಡೆದಿದೆ. ಹೊಸೂರು ಗ್ರಾಮದ ಶೇಖರ್ ಮತ್ತು ಶಿವೇಗೌಡ ಎಂಬುವರಿಗೆ ಸೇರಿದ ಮನೆ ಕುಸಿದಿದ್ದು, ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ಮಂಗಳವಾರ ಸಂಜೆ ಸುರಿದ ಧಾರಾಕಾರ ಮಳೆಗೆ ಮನೆ ಬಿರುಕು ಬಿಟ್ಟಿತ್ತು. ರಾತ್ರಿ ವೇಳೆ ಛಾವಣಿ ಸಮೇತ ಬಿದ್ದು ಹೋಗಿದ್ದು, ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.