ಮಳೆಯಿಂದಾಗಿ ನೀರುಪಾಲಾದ 4 ಲಕ್ಷ ಮೌಲ್ಯದ ಈರುಳ್ಳಿ: ಕಂಗಾಲಾದ ರೈತ - onion crop loss
ಕೊಪ್ಪಳ: ಜಿಲ್ಲೆಯ ಕುಷ್ಟಗಿ ತಾಲೂಕಿನ ಬಳೂಟಗಿ ಗ್ರಾಮದಲ್ಲಿ ರಾತ್ರಿ ಸುರಿದ ಭಾರಿ ಮಳೆಗೆ ಈರುಳ್ಳಿ ಬೆಳೆ ಸಂಪೂರ್ಣ ಹಾಳಾಗಿದ್ದು, ಬೆಳೆಗಾರ ಕಂಗಾಲಾಗಿದ್ದಾನೆ. ಸಂಗಪ್ಪ ಎಲಿಗಾರ ಎಂಬ ರೈತ ಹೊಲದಲ್ಲಿದ್ದ ಈರುಳ್ಳಿಯನ್ನು ಕಟಾವ್ ಮಾಡಿ ಮಾರುಕಟ್ಟೆಗೆ ಸಾಗಿಸುವ ಸಲುವಾಗಿ ಸುಮಾರು 200 ಚೀಲಗಳಲ್ಲಿ ತುಂಬಿಸಿ ಇಟ್ಟಿದ್ದರು. ಆದರೆ ರಾತ್ರಿ ಸುರಿದ ಭಾರಿ ಮಳೆಗೆ ಕಟಾವು ಮಾಡಿದ್ದ ಈರುಳ್ಳಿಯಲ್ಲಿ ಮಳೆಯ ನೀರು ನಿಂತು ಈರುಳ್ಳಿ ಕೊಳೆತು ಹೋಗಿದೆ. ಅಲ್ಲದೇ ಒಂದಷ್ಟು ನೀರಲ್ಲಿ ಕೊಚ್ಚಿ ಹೋಗಿದೆ.ಇದರಿಂದ ರೈತ ಕಂಗಾಲಾಗಿದ್ದು, ಸುಮಾರು ನಾಲ್ಕು ಲಕ್ಷ ರೂಪಾಯಿ ಈರುಳ್ಳಿ ಹಾಳಾಗಿದ್ದು ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.