ಧಾರಾಕಾರ ಮಳೆಯಿಂದ ಮನೆಯೊಳಗೆ ನುಗ್ಗಿದ ನೀರು.. ಜನಜೀವನ ಅಸ್ತವ್ಯಸ್ತ - ಕೊಪ್ಪಳ ಲೇಟೆಸ್ಟ್ ನ್ಯೂಸ್
ಕೊಪ್ಪಳ: ಜಿಲ್ಲೆಯಾದ್ಯಂತ ಶನಿವಾರ ತಡರಾತ್ರಿ ಸುರಿದ ಧಾರಾಕಾರ ಮಳೆಗೆ ಕೊಪ್ಪಳ ತಾಲೂಕಿನ ಮಂಗಳಾಪುರ ಸೇರಿದಂತೆ ತಗ್ಗು ಪ್ರದೇಶದ ಕೆಲ ಮನೆಗಳಿಗೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಮನೆಗಳಿಗೆ ನೀರು ನುಗ್ಗಿದ ಪರಿಣಾಮ ದವಸ-ಧಾನ್ಯ, ಬಟ್ಟೆ, ಆಹಾರ ಪದಾರ್ಥ ನೀರುಪಾಲಾಗಿವೆ. ರಾತ್ರಿಯಿಡಿ ನಿದ್ದೆಗೆಟ್ಟ ಜನರು ಮನೆಗೆ ನುಗ್ಗಿದ ನೀರು ಹೊರಹಾಕಿದ್ದಾರೆ. ಈ ಕುರಿತು ನಮ್ಮ ಪ್ರತಿನಿಧಿ ನೀಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ.