ಮಂಜಿನನಗರಿಯಲ್ಲಿ ಭಾರಿ ಗುಡುಗು ಸಹಿತ ಆಲಿಕಲ್ಲು ಮಳೆ.. ಜನರಿಗೆ ಆನಂದ ಜತೆಗೆ ಆತಂಕ! - ಆಲಿಕಲ್ಲು ಮಳೆ
ಈಗಾಗಲೇ ಅಗಸ್ಟ್ ತಿಂಗಳಲ್ಲಿ ಸುರಿದ ಮಳೆ ಕೊಡಗು ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಪ್ರಾಣ ಹಾಗೂ ಆಸ್ತಿ ಹಾನಿ ಉಂಟು ಮಾಡಿದೆ. ಅಲ್ಲದೆ ಸಾವಿರಾರು ಜನ ಮನೆಗಳನ್ನು ಕಳೆದುಕೊಂಡು ಸಂತ್ರಸ್ತರಾಗಿದ್ದಾರೆ. ತಾಲೂಕಿನ ಕರಡಿಗೋಡು, ಕುಂಬಾರಗುಂಡಿ ಹಾಗೂ ನೆಲ್ಯಹುದಿಕೇರಿ ಗ್ರಾಮದ ಸಾಕಷ್ಟು ಮಂದಿ ಪುನರ್ವಸತಿ ಕೇಂದ್ರಗಳಲ್ಲೇ ವಾಸವಿದ್ದಾರೆ. ಈ ನಡುವೆ ಮತ್ತೆ ಇಂದು ಜಿಲ್ಲೆಯಲ್ಲಿ ಗುಡುಗು ಸಹಿತ ಆಲಿಕಲ್ಲು ಮಳೆಯಾಗಿದ್ದು, ಮಡಿಕೇರಿ ಸೇರಿ ಭಾಗಮಂಡಲ, ನಾಪೋಕ್ಲು ಹಾಗೂ ಬ್ರಹ್ಮಗಿರಿ ಭಾಗದಲ್ಲಿ ಮಧ್ಯಾಹ್ನದಿಂದ ಎಡಬಿಡದೆ ಮಳೆ ಸುರಿಯುತ್ತಿದೆ. ಇದರಿಂದ ಸ್ಥಳೀಯರಿಗೆ ಆನಂದದ ಜತೆಗೆ ಆತಂಕವೂ ಎದುರಾಗಿದೆ.