ಕೊಡಗಿನಲ್ಲಿ ಮುಂದುವರಿದ ಮಳೆ: ದೈನಂದಿನ ಕೆಲಸಗಳಿಗೂ ಕಿರಿ-ಕಿರಿ - heavy rain in kodagu
ಕೊಡಗು: ಜಿಲ್ಲಾದ್ಯಂತ ಮಳೆಯ ಅಬ್ಬರ ಜೋರಾಗಿದ್ದು, ಮುಂಜಾನೆಯಿಂದಲೂ ಸುರಿಯುತ್ತಿರೋ ಮಳೆಗೆ ಜಿಲ್ಲೆಯ ಜನ ಕಂಗಾಲಾಗಿದ್ದಾರೆ. ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ಥವ್ಯಸ್ಥವಾಗಿದ್ದು, ಮಡಿಕೇರಿ, ತಲಕಾವೇರಿ, ಭಾಗಮಂಡಲ ಸೇರಿ ಹಲವು ಕಡೆಗಳಲ್ಲಿ ಮುಂಜಾನೆಯಿಂದಲೂ ಬಿಟ್ಟು ಬಿಡದೇ ಮಳೆ ಸುರಿಯುತ್ತಿದೆ. ಇದರಿಂದ ಜನ ಮತ್ತೆ ಆತಂಕಕ್ಕೆ ಒಳಗಾಗಿದ್ದು ದೈನಂದಿನ ಕೆಲಸಗಳಿಗೂ ಅಡ್ಡಿ ಉಂಟು ಮಾಡುತ್ತಿದೆ.