ಗಾಳಿ-ಮಳೆಗೆ ಉರುಳಿದ ಮರ... ಮಡಿಕೇರಿ-ಮಂಗಳೂರು ಮುಖ್ಯ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತ - ರಾಷ್ಟ್ರೀಯ ಹೆದ್ದಾರಿಯಲ್ಲಿ ಮರ ಉರುಳಿ
ಕೊಡಗು: ಮಳೆ-ಗಾಳಿಗೆ ಜಿಲ್ಲೆಯ ಕಾಟಕೇರಿ ಬಳಿ ರಾಷ್ಟ್ರೀಯ ಹೆದ್ದಾರಿ 275 ರಲ್ಲಿ ಬೃಹತ್ ಮರವೊಂದು ಉರುಳಿ ಬಿದ್ದಿದೆ. ಮಡಿಕೇರಿ-ಮಂಗಳೂರು ಮುಖ್ಯ ರಸ್ತೆ ಮೇಲೆ ಮರ ನೆಲಕ್ಕುರುಳಿ, ಕೆಲಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. ನಂತರ ಸ್ಥಳೀಯರ ನೆರವಿನಿಂದ ಮರವನ್ನು ತೆರವುಗೊಳಿಸಿ, ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.