ಹೊಸದುರ್ಗದಲ್ಲಿ ಭಾರೀ ವರ್ಷಧಾರೆ: ಮನೆಗಳಿಗೆ ನುಗ್ಗಿದ ನೀರು - ಹೊಸದುರ್ಗ ತಾಲೂಕಿನ ದೇವಪುರ ಕಾಲೋನಿ
ಚಿತ್ರದುರ್ಗ: ಸತತ ಎರಡು ದಿನಗಳಿಂದ ಸುರಿದ ಭಾರೀ ಮಳೆಗೆ ಜಿಲ್ಲೆಯ ಹೊಳಲ್ಕೆರೆ ಹಾಗೂ ಹೊಸದುರ್ಗ ತಾಲೂಕಿನ ಬಹುತೇಕ ಕೆರೆಗಳು ತುಂಬಿ ಕೋಡಿ ಬಿದ್ದಿವೆ. ಹಳ್ಳಗಳು ತುಂಬಿದ ಪರಿಣಾಮ ಮನೆಗಳು ಜಲಾವೃತವಾಗಿವೆ. ಹೊಸದುರ್ಗ ತಾಲೂಕಿನ ದೇವಪುರ ಕಾಲೋನಿ, ಕಂಠಪುರ ಕೋಡಿಹಳ್ಳಿ, ಬೆನಕನಹಳ್ಳಿ ಕಾಲೋನಿಗಳಿಗೆ ನೀರು ನುಗ್ಗಿದೆ. ಇನ್ನು ಆಲದಹಳ್ಳಿ, ದೇವಿಗೆರೆ ಗ್ರಾಮದಲ್ಲಿ ಮನೆಗಳು ಕುಸಿದು ಬಿದ್ದಿವೆ. ಹೊಳಲ್ಕೆರೆ ತಾಲೂಕಿನಲ್ಲೂ ವರುಣ ಆರ್ಭಟಿಸಿದ್ದು, ಮಳೆ ನೀರಿನಿಂದ ಮನೆಯ ಸಾಮಗ್ರಿಗಳು ಸಂಪೂರ್ಣವಾಗಿ ಹಾಳಾಗಿವೆ.