ಹಾಸನದಲ್ಲಿ ಬಿರುಗಾಳಿ ಮಳೆಗೆ ಧರೆಗುರುಳಿದ ಮರಗಳು - ಹಾಸನದಲ್ಲಿ ಭಾರಿ ಮಳೆ
ಶುಕ್ರವಾರ ಸಂಜೆ ಸುರಿದ ಬಿರುಗಾಳಿ ಮಳೆಗೆ ಹಾಸನ ತಾಲೂಕಿನ ಗೊರೂರಿನಲ್ಲಿರುವ ಜಗನ್ನಾಥ್ ಎಂಬುವರ ಜಮೀನಿನಲ್ಲಿದ್ದ ಬೇವಿನ ಮರಗಳು ನೆಲಕ್ಕೆ ಉರುಳಿವೆ. ಮಳೆ ತಂದ ಅನಾಹುತದಿಂದ ಕೃಷಿಕರ ಲಕ್ಷಾಂತರ ರೂ. ಮೌಲ್ಯದ ಮರಗಳು ಧರೆಗುರುಳಿವೆ. ಅಲ್ಲದೆ ಮನೆಗಳ ಮೇಲ್ಛಾವಣಿ ಹಾರಿದ್ದು, ಮನೆ ಗೋಡೆ ಸಹ ಕುಸಿದಿದೆ.