ಹಾನಗಲ್ನಲ್ಲಿ ಧಾರಾಕಾರ ಮಳೆ: ರೈತರಿಗೆ ಸಂತಸ, ವಾಹನ ಸವಾರರ ಪರದಾಟ - haveri rain news updates
ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನಾದ್ಯಂತ ವರುಣನ ಆಗಮನವಾಗಿದ್ದು ತಾಲೂಕಿನ ಬಹುತೇಕ ಭಾಗಗಳಲ್ಲಿ ಎಡಬಿಡದೆ ಮಳೆ ಸುರಿಯುತ್ತಿದೆ. ಮಳೆಯಿಂದಾಗಿ ಇದೀಗ ರೈತರ ಮುಖದಲ್ಲಿ ಸಂತಸ ಮೂಡಿದೆ. ಧಾರಾಕಾರ ಮಳೆಗೆ ಪಟ್ಟಣದ ರಸ್ತೆಗಳು ಮತ್ತು ಚರಂಡಿಗಳು ತುಂಬಿ ಹರಿದ ಪರಿಣಾಮ ಕನಕದಾಸ ಸರ್ಕಲ್,ಉದಾಸಿ ಕಲ್ಯಾಣಮಂಟಪದ ಎದುರಿನ ರಸ್ತಗಳು ಸಂಪೂರ್ಣ ಜಲಾವೃತಗೊಂಡು ವಾಹನ ಸವಾರರು ಪರದಾಡುವಂತಾಯಿತು.