ನಿಮಗೆ ಕೈ ಮುಗೀತೀವಿ ನಾವು, ಹೊತ್ತುಕೊಳ್ಳಾಕಾದ್ರೂ ಏನಾರ ಕೊಡ್ರಿಪಾ..ನೆರೆ ಸಂತ್ರಸ್ರ ಬದುಕಿನ ಬವಣೆ ನೋಡಿ - ಗದಗದಲ್ಲಿ ಭೀಕರ ಪ್ರವಾಹ
ಗದಗ: ಒಂದಲ್ಲ, ಮೂರು ಸಾರಿ ಪ್ರವಾಹ ಬಂದು ಈ ಗ್ರಾಮದ ಜನರ ಬದುಕನ್ನು ಬೀದಿಗೆ ತಂದಿದೆ. ರಸ್ತೆ ತುಂಬಾ ಗುಡಿಸಲು ಹಾಕಿಕೊಂಡು ಹಗಲು ರಾತ್ರಿಯೆನ್ನದೇ ಮಳೆಯಲ್ಲಿ ಮೂಲಭೂತ ಸೌಕರ್ಯವಿಲ್ಲದೆ ಗದಗ ಜಿಲ್ಲೆಯ ನರಗುಂದ ತಾಲೂಕಿನ ಲಕಮಾಪುರ ಗ್ರಾಮದ ಜನ ಬೀದಿಬದಿ ಜೀವನ ನಡೆಸ್ತಿದ್ದಾರೆ. ನಮ್ಮ ಪ್ರತಿನಿಧಿ ಸಂತ್ರಸ್ತರನ್ನು ಮಾತನಾಡಿಸಿ ಸಂಕಷ್ಟವನ್ನು ಪ್ರತ್ಯಕ್ಷವಾಗಿ ವಿವರಿಸಿದ್ದಾರೆ.