ಹಾರೋಬೆಳವಡಿ ಸೇತುವೆ ಮುಳುಗಡೆ:ಧಾರವಾಡ - ಸವದತ್ತಿ ರಸ್ತೆ ಸಂಚಾರ ಬಂದ್ - ಧಾರವಾಡ ಭಾರಿ ಮಳೆ
ಧಾರವಾಡ: ಸತತ ಮಳೆಯಿಂದ ತಾಲೂಕಿನ ಹಾರೋಬೆಳವಡಿ ಬಳಿಯ ತಾತ್ಕಾಲಿಕ ಸೇತುವೆ ಮುಳುಗಡೆಯಾಗಿದೆ. ಧಾರವಾಡ ತಾಲೂಕಿನ ಹಾರೋಬೆಳವಡಿ ಗ್ರಾಮದ ಪಕ್ಕದಲ್ಲಿದ್ದ ಸೇತುವೆ ಕಳೆದ ವರ್ಷದ ಪ್ರವಾಹಕ್ಕೆ ಹಾನಿಯಾಗಿತ್ತು. ಸೇತುವೆ ದುರಸ್ತಿ ಕಾರ್ಯ ನಡೆದಿದ್ದ ಹಿನ್ನೆಲೆ ಪಕ್ಕದಲ್ಲಿ ತಾತ್ಕಾಲಿಕ ಸೇತುವೆ ನಿರ್ಮಿಸಲಾಗಿತ್ತು. ಆದರೀಗ ಮಳೆಯಿಂದಾಗಿ ಸೇತುವೆ ಮುಳುಗಡೆಯಾಗಿದ್ದು, ಧಾರವಾಡ - ಸವದತ್ತಿ ರಸ್ತೆ ಸಂಚಾರ ಬಂದ್ ಆಗಿದೆ.