ದಾವಣಗೆರೆಯಲ್ಲಿ ವರುಣನ ಆರ್ಭಟ..ಎಪಿಎಂಸಿ ಮಾರ್ಕೆಟ್,ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಜಲಾವೃತ - Davanagere KSRTC Bus Stand
ದಾವಣಗೆರೆ: ದಾವಣಗೆರೆಯಲ್ಲಿ ವರುಣನ ಆರ್ಭಟ ಜೋರಾಗಿದ್ದು,ನಗರದ ಎಪಿಎಂಸಿ ಮಾರ್ಕೆಟ್, ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಜಲಾವೃತವಾಗಿದೆ. ದಾವಣಗೆರೆ ನಗರ ಸೇರಿದಂತೆ ಜಗಳೂರು ತಾಲೂಕಿನ ವಿವಿಧೆಡೆ ಒಂದು ಗಂಟೆಗೂ ಹೆಚ್ಚು ಕಾಲ ಗುಡುಗು ಸಹಿತ ಮಳೆ ಸುರಿದಿದ್ದು, ಮಳೆಯಿಂದಾಗಿ ಎಪಿಎಂಸಿ ಮಾರ್ಕೆಟ್ ಹಾಗೂ ಬಸ್ ನಿಲ್ದಾಣ ಜಲಾವೃತವಾಗಿತ್ತು. ಇನ್ನೂ, ದಾವಣಗೆರೆ ಹೈಸ್ಕೂಲ್ ಮೈದಾನದಲ್ಲಿ ನಡೆಯುತ್ತಿರುವ ಧರ್ಮ ಸಮ್ಮೇಳನದಲ್ಲಿ ನೀರು ಹರಿಯಲು ಆರಂಭಿಸಿದ್ದು, ಭಕ್ತಾಧಿಗಳು ಮಳೆಯಲ್ಲಿ ಸಿಲುಕಿದ್ದರು.