ಗಾಳಿ ಸಹಿತ ಭಾರೀ ಮಳೆ...ವರುಣನ ಆರ್ಭಟಕ್ಕೆ ನೆಲಕಚ್ಚಿದ ಮನೆಗಳು - ಬೀದಿ ಪಾಲಾದ ಬಡ ಕುಟುಂಬಗಳು
ಚಿತ್ರದುರ್ಗ: ನಿನ್ನೆ ಸುರಿದ ಗಾಳಿ ಸಹಿತ ಭಾರಿ ಮಳೆಗೆ ಮೈ ನಡುಕು ಹುಟ್ಟಿಸುವಂತಹ ದೃಶ್ಯಗಳು ಮೊಬೈಲ್ನಲ್ಲಿ ಸೆರೆಯಾಗಿವೆ. ಮಳೆ ಹಾಗೂ ಗಾಳಿ ಅರ್ಭಟಕ್ಕೆ ಭರಮಸಾಗರ ಹೋಬಳಿಯ ಕೆಲ ಗ್ರಾಮಗಳು ನಲುಗಿ ಹೋಗಿದ್ದು, ರಹಮತುಲ್ಲಾ, ಗೌಸ್ ಪೀರ್ ಎಂಬವವರಿಗೆ ಸೇರಿದ ಗುಡಿಸಲಿನ ಮನೆಗಳು ನೆಲಕ್ಕೆ ಉರುಳಿವೆ. ಈ ಮೂಲಕ ಬಡ ಕುಟುಂಬಗಳು ಬೀದಿ ಪಾಲಾಗಿವೆ. ಮನೆ ಕಳೆದುಕೊಂಡವರು ಪರಿಹಾರಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಗಂಗಸಮುದ್ರದ ಬಳಿ ಬಿರುಗಾಳಿಗೆ 8 ವಿದ್ಯುತ್ ಕಂಬಗಳು ನೆಲಕಚ್ಚಿವೆ. ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.