ಕಾಯ್ದು ಕಾಯ್ದು ಸಾಕಾಯ್ತು.. ಕೋಟೆನಗರಿಗೆ ಈಗ ಬಂದೆಯಾ.. - chitradurga rain
ಮಳೆ ಇಲ್ಲದೆ ಹೈರಾಣಾಗಿದ್ದ ಚಿತ್ರದುರ್ಗ ತಾಲೂಕಿನ ಜನರಿಗೆ ವರುಣ ಕೃಪೆ ತೋರಿದ್ದಾನೆ. ಸತತ ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಯಿಂದ ಭೂತಾಯಿ ತಂಪಾಗಿದ್ದಾಳೆ. ಬಿತ್ತನೆ ಮಾಡಿ ಮಳೆಗಾಗಿ ಕಾಯುತ್ತ ಬೇಸರದಿಂದಾಗಿ ಚಿತ್ರದುರ್ಗ ತಾಲೂಕಿನ ರೈತರ ಮೊಗದಲ್ಲಿ ಇದೀಗ ಮಂದಹಾಸ ಮೂಡಿದೆ.