ಭಾರಿ ಮಳೆಗೆ ರಸ್ತೆ, ಮನೆಗಳು ಜಲಾವೃತ:150 ಜನರ ಬದುಕು ನೀರುಪಾಲು - ರಾಮಗಿರಿಯ ನಾಯಕರಕಟ್ಟೆಯ ಹಟ್ಟಿಗಳು ಜಲಾವೃತ
ಚಿತ್ರದುರ್ಗ ಜಿಲ್ಲಾದ್ಯಂತ ಭಾರಿ ಮಳೆಯಾದ ಹಿನ್ನೆಲೆ ಹೊಳಲ್ಕೆರೆ ಹಾಗೂ ಹೊಸದುರ್ಗ ತಾಲೂಕಿನ ಬಹುತೇಕ ಕೆರೆಗಳು ತುಂಬಿ ಕೋಡಿ ಬಿದ್ದಿದ್ದು, ಪರಿಣಾಮ ದೇವಪುರ, ಬೆನಕನಹಳ್ಳಿ ಕಾಲೋನಿಗಳಿಗೆ ನೀರು ನುಗ್ಗಿದ್ದು, ಮನೆಗಳು ಜಲಾವೃತವಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಮಳೆ ನೀರಿನಿಂದ ರಸ್ತೆಗಳು ಕೂಡ ಜಲಾವೃತವಾಗಿದೆ. ಹಾಗೂ ಹೊಳಲ್ಕೆರೆ ತಾಲೂಕಿನ ರಾಮಗಿರಿ ಸಮೀಪದ ನಾಯಕರಕಟ್ಟೆಯ ಹಟ್ಟಿಗಳು ಜಲಾವೃತಗೊಂಡಿದ್ದು, 150 ಜನರ ಬದುಕು ನೀರುಪಾಲಾಗಿದೆ. ಜಲಾವೃತಗೊಂಡ ಕುಟುಂಬದ ಸದಸ್ಯರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.