ತುಂಬಿದ ಐತಿಹಾಸಿಕ ಚಂದ್ರವಳ್ಳಿ ಕೆರೆ: ಬಾಗೀನ ಅರ್ಪಿಸಿದ ಮುರುಘಾ ಶರಣರು - ಚಂದ್ರವಳ್ಳಿ ಕೆರೆಗೆ ಬಾಗೀನ
ಚಿತ್ರದುರ್ಗ: ಕಳೆದ ಒಂದು ವಾರದ ಹಿಂದೆ ಕೋಟೆನಾಡಿನಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಇಲ್ಲನ ಕೆರೆ ಕಟ್ಟೆಗಳು ಸಂಪೂರ್ಣ ಭರ್ತಿಯಾಗಿವೆ. ಅದೇ ರೀತಿ ನಗರದ ಐತಿಹಾಸಿಕ ಕೆರೆ ಎಂದೆ ಪ್ರಸಿದ್ದಿ ಪಡೆದಿರೋ ಚಂದ್ರವಳ್ಳಿ ಕೆರೆ ಕೂಡ ಮೈದುಂಬಿ ಹರಿಯುತ್ತಿದ್ದು, ಕೋಡಿ ಬಿದ್ದು ಬಂಡೆಗಳ ಮೇಲೆ ಫಾಲ್ಸ್ ಮಾದರಿಯಲ್ಲಿ ನೀರು ಹರಿದು ಬರುತ್ತಿದೆ. ಆದ್ದರಿಂದ ಇಂದು ಚಂದ್ರವಳ್ಳಿ ಕೆರೆಗೆ ಸ್ಥಳೀಯ ಶಾಸಕರಾದ ಜಿ.ಎಚ್ ತಿಪ್ಪಾರೆಡ್ಡಿ ಹಾಗೂ ಶರಣರಾದ ಶ್ರೀ ಮುರುಘಾ ಶರಣರು ಬಾಗೀನ ಅರ್ಪಿಸಿದರು. ಇದರ ಮೂಲಕ ನಮ್ಮ ಐತಿಹಾಸಿಕ ಕೆರೆ ಚಂದ್ರವಳ್ಳಿಯಲ್ಲಿ ಇಂದು ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು.