ಮೂಡಿಗೆರೆಯಲ್ಲಿ ಮಳೆ ಅವಾಂತರ: ಬಾಳೂರಿನಲ್ಲಿ ಗುಡ್ಡ ಕುಸಿತ... ಹೆಚ್ಚಿದ ಆತಂಕ - ಕಾಫೀ ತೋಟ
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಕಳೆದ ಕೆಲ ದಿನಗಳ ಹಿಂದೆ ಸುರಿದ ಮಹಾ ಮಳೆ ಹತ್ತಾರೂ ಅವಾಂತರಗಳನ್ನು ಸೃಷ್ಟಿ ಮಾಡಿದೆ. ಕೆಲ ದಿನಗಳಿಂದ ಕೊಂಚ ಬಿಡುವು ನೀಡಿದ್ದ ಈ ಮಳೆ ಈಗ ಮತ್ತೆ ಪ್ರಾರಂಭ ಆಗಿದ್ದು, ಜನರಲ್ಲಿ ಮತ್ತೆ ಆತಂಕ ಶುರುವಾಗಿದೆ. ಇದೀಗ ತಾಲೂಕಿನ ಬಾಳೂರು ಗ್ರಾಮದಲ್ಲಿಯೂ ಹಲವೆಡೆ ಗುಡ್ಡ ಕುಸಿದಿದ್ದು, ಹತ್ತಾರೂ ಎಕರೇ ಕಾಫಿ ತೋಟ ಕೊಚ್ಚಿಕೊಂಡು ಹೋಗಿದೆ.ಇದನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದ ಇಲ್ಲಿನ ಜನರು ಮುಂದೆ ಏನು ಮಾಡೋದು ಎಂಬ ಚಿಂತೆಯಲ್ಲಿದ್ದಾರೆ.