ಮಳೆ ಆರ್ಭಟಕ್ಕೆ ಕೊಚ್ಚಿ ಹೋದ ಸೇತುವೆ: ಹೊಲಗಳಿಗೆ ನುಗ್ಗಿದ ನೀರು...! - rain news
ಬೀದರ್: ಮುಂಗಾರು ಮಳೆ ಆರ್ಭಟಕ್ಕೆ ಜಿಲ್ಲೆಯಲ್ಲಿ ಸೇತುವೆ ಭಾಗ ಕೊಚ್ಚಿ ಹೋಗಿದ್ದು, ರೈತರ ಗದ್ದೆಗಳಿಗೆ ನೀರು ನುಗ್ಗಿ ಅಪಾರ ಹಾನಿ ಮಾಡಿದೆ. ಶನಿವಾರ ರಾತ್ರಿ ಹಾಗೂ ಭಾನುವಾರ ಬೆಳಗ್ಗಿನ ಜಾವ ಸುರಿದ ಧಾರಾಕಾರ ಮಳೆಗೆ ಜಿಲ್ಲೆಯ ಭಾಲ್ಕಿ ತಾಲೂಕಿನ ಹಾಲ ಹಿಪ್ಪರಗಾ ಗ್ರಾಮದ ಕೂಡು ರಸ್ತೆಯ ಸೇತುವೆ ಭಾಗಶಃ ನೀರು ಪಾಲಾಗಿದೆ. ಇನ್ನು ಮಳೆ ನೀರು ರೈತರ ಗದ್ದೆಗಳಿಗೆ ನುಗ್ಗಿ ಭೂಮಿಯಲ್ಲಿನ ಮಣ್ಣು ಕೊಚ್ಚಿ ಹೋಗಿದೆ.