ಬೀದರ್ನಲ್ಲಿ ಮಳೆರಾಯನ ಆರ್ಭಟ, ಸಂಚಾರ ಅಸ್ತವ್ಯಸ್ತ : ಪ್ರತ್ಯಕ್ಷ ವರದಿ - ಬೀದರ್ ಮಳೆ ಸುದ್ದಿ
ಜಿಲ್ಲೆಯ ಕಮಲಾನಗರ ತಾಲೂಕಿನ ದಾಬಕಾ, ಮುರ್ಕಿ, ಡೊಣಗಾಂವ್, ತೋರಣಾ ಭಾಗದಲ್ಲಿ ಸತತ ಮೂರು ಗಂಟೆಗಳ ಕಾಲ ಭಾರೀ ಮಳೆ ಸುರಿದಿದೆ. ಇದರಿಂದಾಗಿ ಬೆಳಕೊಣಿ, ಭೋಪಾಳಗಡ ಸೇತುವೆಗಳು ಮುಳುಗಡೆಯಾಗಿವೆ. ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ. ಈ ಕುರಿತು ಈಟಿವಿ ಭಾರತದ ಪ್ರತಿನಿಧಿ ನೀಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ.