ಬೀದರ್ನಲ್ಲಿ ಬಿರುಸಿನ ಮಳೆ: ಸಂಚಾರ ಅಸ್ತವ್ಯಸ್ತ - Heavy rain
ಬೀದರ್ನಲ್ಲಿ ಶುಕ್ರವಾರ ಸಂಜೆ ಗುಡುಗು ಸಹಿತ ಮಳೆಯಾಗಿದ್ದು ಬಿಸಿಲಿನಿಂದ ಕಂಗೆಟ್ಟಿದ್ದ ಜನರು ಮಳೆರಾಯನ ಆಗಮನದಿಂದ ತುಸು ತಂಪಿನ ಅನುಭವ ಪಡೆದರು. ಕಾದು ಕೆಂಡವಾಗಿದ್ದ ಭೂಮಿ ಅಕಾಲಿಕ ಮಳೆಯಿಂದ ಕೊಂಚ ತಂಪಾಯಿತು. ಇನ್ನು ಹಲವಡೆ ರಭಸದ ಮಳೆಗೆ ಸಂಚಾರ ಅಸ್ತವ್ಯಸ್ತವಾದರೆ, ಮತ್ತೆ ಕೆಲವು ಮನೆಗಳ ಶೀಟು, ಹೆಂಚುಗಳು ಗಾಳಿಗೆ ಹಾರಿ ಹೋಗಿವೆ.