ನಗರದಲ್ಲಿ ವರುಣನ ಆರ್ಭಟ: ರಸ್ತೆಗಳು ಜಲಾವೃತ - Bengalore rain news
ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಸಂಜೆ ವೇಳೆಗೆ ನಗರದಲ್ಲಿ ಮಳೆ ಆರಂಭವಾಗಿದೆ. ರಾಜ್ಯದಲ್ಲಿ ಹಾಗೂ ನಗರದಲ್ಲಿ ಇನ್ನೆರೆಡು ದಿನ ಮಳೆ ಸಾಧ್ಯತೆ ಇದೆ ಎಂದು ಈಗಾಗಲೇ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಹಲವು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ. ನಗರದಲ್ಲಿ ಗುಡುಗು ಸಹಿತ ಮಳೆಯಾಗುತ್ತಿದ್ದು ರಿಚ್ಮಂಡ್ ಸರ್ಕಲ್, ಲಾಲ್ ಬಾಗ್,ಶಾಂತಿನಗರ, ಟೌನ್ ಹಾಲ್, ವಿಲ್ಸನ್ ಗಾರ್ಡನ್ ಜಯನಗರ, ವಿಜಯನಗರದ ಸೇರಿದಂತೆ ಹಲವೆಡೆ ಧಾರಾಕಾರವಾಗಿ ಮಳೆಯಾಗುತ್ತಿದೆ. ನಗರದ ತಗ್ಗುಪ್ರದೇಶದ ರಸ್ತೆಗಳು, ಅಂಡರ್ ಪಾಸ್ಗಳಲ್ಲಿ ನೀರು ನಿಂತುಕೊಂಡಿದ್ದು, ವಾಹನ ಸವಾರರು ಪರದಾಡುವ ಸ್ಥಿತಿ ಎದುರಾಗಿದೆ. ಸದ್ಯ ಯಾವುದೇ ಹಾನಿ ವರದಿಯಾಗಿಲ್ಲ ಎಂದು ಬಿಬಿಎಂಪಿ ಕಂಟ್ರೋಲ್ ರೂಂ ತಿಳಿಸಿದೆ.