ಅಂಕೋಲಾದಲ್ಲಿ ವರುಣಾರ್ಭಟ : ಬಿರುಕುಬಿಟ್ಟ ಮನೆಗಳು, ಗ್ರಾಮಸ್ಥರ ಆತಂಕ - Ankola rain news
ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಅಬ್ಬರಿಸುತ್ತಿದ್ದ ಮುಂಗಾರು ಮಳೆ ಅವಾಂತರವನ್ನೆ ಸೃಷ್ಟಿಸಿದೆ. ಅಂಕೋಲಾ ತಾಲೂಕಿನ ಗ್ರಾಮೀಣ ಪ್ರದೇಶಗಳಾದ ನದಿಭಾಗ್, ಬೊಬ್ರುವಾಡ ಹಾಗೂ ಖಾರ್ವಿವಾಡಗಳಲ್ಲಿ ಧಾರಾಕಾರ ಮಳೆಯಿಂದ ಮನೆಗಳ ಗೋಡೆಗಳು ಬಿರುಕು ಬಿಟ್ಟಿವೆ. ಮನೆಯಲ್ಲಿದ್ದ ಅಕ್ಕಿ, ಬೇಳೆ, ಗೋಧಿ ಎಲ್ಲವೂ ನೀರುಪಾಲಾಗಿದ್ದು, ಜನರು ಹೊತ್ತಿನ ಊಟಕ್ಕೂ ಪರಿತಪಿಸಬೇಕಾಗಿದೆ. ಅಲ್ಲದೆ ಮಳೆಗಾಲದ ಆರಂಭದಲ್ಲಿಯೇ ಸೃಷ್ಟಿಯಾದ ಅವಾಂತರದಿಂದ ಗ್ರಾಮಸ್ಥರು ಆತಂಕಗೊಂಡಿದ್ದಾರೆ.
Last Updated : Jun 14, 2020, 6:57 AM IST