ಆಹಾ... ವರುಣ ತಂದ ಆನಂದ : ಅಪರೂಪಕ್ಕೆ ತುಂಬಿತು ಉಣಕಲ್ ಕೆರೆ - ಹುಬ್ಬಳ್ಳಿಯ ಉಣಕಲ್ ಕೆರೆ
ಹುಬ್ಬಳ್ಳಿ: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ನಗರದ ಉಣಕಲ್ ಕೆರೆ ತುಂಬಿ ಹರಿಯುತ್ತಿದೆ. ಹಲವು ವರ್ಷಗಳ ಬಳಿಕ ಉಣಕಲ್ ಕೆರೆ ತುಂಬಿದ್ದು, ಕೋಡಿ ತುಂಬಿ ಹರಿಯುತ್ತಿದೆ. ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಶ್ರೀನಗರ, ಉಣಕಲ್, ಸಾಯಿನಗರಕ್ಕೆ ನುಗ್ಗುವ ಆತಂಕ ಎದುರಾಗಿದೆ. ಕಳೆದ ಹಲವು ವರ್ಷಗಳಿಂದ ಉಣಕಲ್ ಕೆರೆಯಲ್ಲಿ ಕಸ ಕಡ್ಡಿ, ಪ್ಲಾಸ್ಟಿಕ್ ಹಾಗೂ ಜಲಕಳೆ ತುಂಬಿಕೊಂಡು ಕೆರೆಯ ಅಂದ ಕೆಡಿಸಿತ್ತು. ಇದೀಗ ಧಾರಾಕಾರ ಮಳೆ ಮಳೆ ಬಂದಿದ್ದು, ಕೆರೆಯ ಅಂದವನ್ನು ಹೆಚ್ಚಿಸಿದೆ.