ಕರ್ನಾಟಕ

karnataka

ETV Bharat / videos

ಮಳೆಯಾರ್ಭಟಕ್ಕೆ ಕೊಡಗು ತತ್ತರ... ತ್ರಿವೇಣಿ ಸಂಗಮ ಜಲಾವೃತ! - Talacauvery

By

Published : Aug 6, 2020, 6:15 PM IST

ಭಾಗಮಂಡಲ (ಕೊಡಗು): ಜಿಲ್ಲೆಯಲ್ಲಿ ಆಶ್ಲೇಷ ಮಳೆ ಆರ್ಭಟಿಸುತ್ತಿದ್ದು, ಅತೀ ಹೆಚ್ಚು ಮಳೆಯಾಗುವ ತಲಕಾವೇರಿ ಹಾಗೂ ಭಾಗಮಂಡಲದಲ್ಲಿ ಕಾವೇರಿ ನದಿ ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದೆ. ಭಾಗಮಂಡಲದ ತ್ರಿವೇಣಿ ಸಂಗಮ ಮುಳುಗಡೆಯಾಗಿದ್ದು, ತಲಕಾವೇರಿ-ಭಾಗಮಂಲಡ ರಸ್ತೆ ಸಂಪರ್ಕವೂ ಬಂದ್ ಆಗಿದೆ. ನದಿ ಅಪಾಯ ಮಟ್ಟ ತಲುಪುವ ಮೊದಲು ವ್ಯಾಪಾರಿಗಳು ಅಂಗಡಿ-ಮುಂಗಟ್ಟುಗಳನ್ನು ಖಾಲಿ ಮಾಡಿಕೊಂಡು ಸುರಕ್ಷಿತ ಸ್ಥಳಗಳಿಗೆ ತೆರಳಿದ್ದಾರೆ. ತಲಕಾವೇರಿ, ಬ್ರಹ್ಮಗಿರಿ ತಪ್ಪಲು, ಭಾಗಮಂಡಲ ವ್ಯಾಪ್ತಿಯಲ್ಲಿ ‌ಧಾರಾಕಾರ ಮಳೆ ಸುರಿಯುತ್ತಿದ್ದು, ಜಿಲ್ಲೆಯ ಜೀವನದಿ ಪ್ರವಾಹದಂತೆ ಹರಿಯುತ್ತಿದೆ.

ABOUT THE AUTHOR

...view details