ಬೆಣ್ಣೆನಗರಿಯಲ್ಲಿ ಧೋ ಅಂತಾ ಸುರಿದ ವರುಣ: ಪರದಾಡಿದ ವಾಹನ ಸವಾರರು - ಧಾರಾಕಾರ ಮಳೆ
ದಾವಣಗೆರೆ ನಗರದಲ್ಲಿ ಸಂಜೆ ಒಂದೂವರೆ ಗಂಟೆ ಧಾರಾಕಾರ ಮಳೆ ಸುರಿಯಿತು. ಕಳೆದ ಕೆಲ ದಿನಗಳಿಂದ ಬಿಡುವು ನೀಡಿದ್ದ ವರುಣ ಇದೀಗ ಮತ್ತೆ ಆರ್ಭಟಿಸಿದ್ದು, ಕೆಲಸದಿಂದ ಮನೆಗೆ ಹೋಗುವವರು, ಸಾರ್ವಜನಿಕರು, ವಾಹನ ಸವಾರರು ಪರದಾಡುವಂತಾಯಿತು. ಕಳೆದ ಕೆಲ ದಿನಗಳಿಂದ ಬೇಸಿಗೆಯ ಬಿಸಿಯಲ್ಲಿದ್ದ ಜನರಿಗೆ ಮಳೆ ಸುರಿದು ತಂಪೆನೆಯ ವಾತಾವರಣ ನೀಡಿತು. ಅದೇ ರೀತಿ ಈ ವರ್ಷದ ಮಳೆಗಾಲ ಪ್ರಾರಂಭವಾಗಿ ನಾಲ್ಕು ತಿಂಗಳು ಕಳೆದರೂ ಸಹ ಹರಿಹರ ತಾಲೂಕಿನಲ್ಲಿ ಉತ್ತಮ ಮಳೆಯಾಗಿರಲಿಲ್ಲ. ಆದರೆ ಬುಧವಾರ ಏಕಾಏಕಿ ಬಂದ ಧಾರಾಕಾರ ಮಳೆಯಿಂದ ರಸ್ತೆಗಳಲ್ಲಿ ನೀರು ನದಿಯಂತೆ ಹರಿಯಿತು. ವಾಹನ ಸವಾರರಿಗೆ ಕಿರಿಕಿರಿಯೂ ಉಂಟಾಯಿತು.