ಕರಾವಳಿಯಲ್ಲಿ ಗಾಳಿ-ಮಳೆ ಅಬ್ಬರ.. ಕೊಚ್ಚಿ ಹೋದ ಬಲೆ, ಬೋಟುಗಳು - ಕರಾವಳಿಯಲ್ಲಿ ಕೊಚ್ಚಿ ಹೋದ ಬಲೆ, ಬೋಟುಗಳು
ಕಾರವಾರ: ಉತ್ತರಕನ್ನಡದ ಕರಾವಳಿ ಭಾಗದಲ್ಲಿ ಕಳೆದೆರಡು ದಿನಗಳಿಂದ ಗಾಳಿ ಸಹಿತ ಮಳೆ ಅಬ್ಬರ ಜೋರಾಗಿದೆ. ಆರೆಂಜ್ ಅಲರ್ಟ್ ಘೋಷಿಸಿದ ಹಿನ್ನೆಲೆ, ಮೀನುಗಾರಿಕೆಗೆ ತೆರಳಿದ್ದ ಬೋಟುಗಳು ಸುರಕ್ಷಿತ ಪ್ರದೇಶಗಳಿಗೆ ವಾಪಸಾಗಿವೆ. ತಡರಾತ್ರಿ ಬೀಸಿದ ಭಾರಿ ಗಾಳಿಗೆ ಲಂಗರು ತುಂಡಾಗಿ ಎರಡು ಬೋಟ್ಗಳು ದಡಕ್ಕೆ ಅಪ್ಪಳಿಸಿವೆ. ಅಲ್ಲದೆ ಹಲವೆಡೆ ನಾಡ ದೋಣಿಗಳು ಸೇರಿ ಬಲೆಗಳು ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿವೆ.