ಬೆಳಗಾವಿ: ಜಲಾವೃತಗೊಂಡ ಕಿರು ಸೇತುವೆ ಮೇಲೆ ವಾಹನ ಸಂಚಾರ - heavy rain fall in belgavi
ಬೆಳಗಾವಿ: ಬೆಳಗಾವಿ-ಮಾಂಡೋಳಿ ಸಂಪರ್ಕಿಸುವ ಸೇತುವೆ ಸೇತುವೆ ದಾಟುತ್ತಿದ್ದ ಬೈಕ್ ಸವಾರ ನೀರಿನ ರಭಸಕ್ಕೆ ಸಿಲುಕಿದ್ದ. ಆತನನ್ನು ಸ್ಥಳೀಯರು ಬೈಕ್ ಸಹಿತ ರಕ್ಷಿಸಿದ್ದಾರೆ. ಇಂತಹ ಅಪಾಯಕಾರಿ ಹರಿವಿನಿಂದಾಗಿ ವಾಹನ ಸಂಚಾರ ನಿಷೇಧಿಸಬೇಕು ಎಂಬುವುದು ಸಾರ್ವಜನಿಕರ ಒತ್ತಾಯವಾಗಿದೆ. ಮಾರ್ಕಂಡೇಯ ನದಿ ನೀರಿನಿಂದ ಕಂಗ್ರಾಳಿ ಸುತ್ತಮುತ್ತಲಿನ ಭತ್ತ, ಕಬ್ಬಿನ ಗದ್ದೆಗಳು ಜಲಾವೃತಗೊಂಡಿವೆ. ಇನ್ನೊಂದೆಡೆ ಬೆಳಗಾವಿ ತಾಲೂಕಿನ ಮಾರಿಹಾಳ ಗ್ರಾಮದಲ್ಲಿರುವ ಈ ಸೇತುವೆ ಭಾರಿ ಮಳೆಗೆ ಕುಸಿಯಲು ಆರಂಭಿಸಿದೆ. ಇದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ. ಸೇತುವೆ ಸಂಪೂರ್ಣ ಕುಸಿದ್ರೆ ಬೆಳಗಾವಿ-ಬಾಗಲಕೋಟೆ ರಾಜ್ಯ ಹೆದ್ದಾರಿಯಲ್ಲಿ ಸಂಚಾರ ಸಂಪೂರ್ಣ ಸ್ಥಗಿತಗೊಳ್ಳಲಿದೆ.
Last Updated : Aug 16, 2020, 10:47 PM IST