ಮಳೆಯಿಂದಾಗಿ ಮನೆಗಳಿಗೆ ನುಗ್ಗಿದ ಚರಂಡಿ ನೀರು: ಗೃಹೋಪಯೋಗಿ ವಸ್ತುಗಳು ನೀರುಪಾಲು - gadag rain problem news
ಕಳೆದ ಎರಡು ತಿಂಗಳ ಹಿಂದೆ ಉತ್ತರ ಕರ್ನಾಟಕದಲ್ಲಿ ವರುಣ ಆರ್ಭಟಿಸಿದ್ದು ಅಷ್ಟಿಷ್ಟಲ್ಲ. ಬಹುತೇಕ ನದಿಗಳು ಉಕ್ಕಿ ಹರಿದು ಬಹುತೇಕ ಪ್ರದೇಶವನ್ನು ಅಕ್ಷರಶಃ ಜಲಮಯವಾಗಿಸಿತ್ತು. ಇದರಲ್ಲಿ ಗದಗ ಜಿಲ್ಲೆ ಕೂಡ ಹೊರತಾಗಿರಲಿಲ್ಲ. ಆದ್ರೆ ಮಳೆ ಕಡಿಮೆಯಾಗಿ ಜನ ಸಹಜ ಸ್ಥಿತಿಗೆ ಮರುಳುತ್ತಿರುವ ನಡುವೆಯೇ ನಿನ್ನೆ ರಾತ್ರಿ ಮಳೆ ಭಾರಿ ಆವಾಂತರವನ್ನೇ ಸೃಷ್ಟಿಸಿದೆ.