ಮಳೆರಾಯ ಸೃಷ್ಟಿಸಿದ ಅವಾಂತರಕ್ಕೆ ಕಲ್ಯಾಣ ಕರ್ನಾಟಕದ ಜನರ ಬದುಕು ಸಂಪೂರ್ಣ ನೀರುಪಾಲು! - Heavy rain create havoc in Kalyana Karnataka
ಕಲಬುರಗಿ : ಈ ವರ್ಷ ಭೀಕರ ಪ್ರವಾಹ ಮತ್ತು ಅತಿವೃಷ್ಟಿಗೆ ಕಲ್ಯಾಣ ಕರ್ನಾಟಕ ಅಕ್ಷರ ಸಹ ತತ್ತರಿಸಿಹೋಗಿದೆ. ಮಳೆಯ ಅಬ್ಬರದಿಂದ ಒಂದು ಕಡೆ ಅನ್ನದಾತರು ಬೆಳೆ ಕಳೆದುಕೊಂಡು ಸಂಕಷ್ಟದಲ್ಲಿದ್ದರೆ ಮತ್ತೊಂದೆಡೆ ಮೀನುಗಾರರ ಕುಟುಂಬಗಳ ಆಧಾರವಾಗಿದ್ದ ಮೀನುಗಳ ಕೆರೆಗಳು ನೀರಿಗೆ ಕೊಚ್ಚಿಹೋಗಿದ್ದು ದಿಕ್ಕು ಕಾಣದೆ ಕಂಗಾಲಾಗಿದ್ದಾರೆ. ಮಳೆರಾಯ ಸೃಷ್ಟಿಸಿದ ಅವಾಂತರಕ್ಕೆ ಕಲ್ಯಾಣ ಕರ್ನಾಟಕದ ಜನರ ಬದುಕು ಸಂಪೂರ್ಣ ನೀರುಪಾಲಾಗಿದೆ ಅಂದರೆ ತಪ್ಪಾಗಲಾರದು.