ಬೆಳಗಾವಿ ಕುಂಭದ್ರೋಣ ಮಳೆ: ಕಟ್ಟಡ ಕುಸಿದು ಯುವತಿ ಸಾವು, ಮೃತರ ಸಂಖ್ಯೆ 6ಕ್ಕೇರಿಕೆ - ಈ ಟಿವಿ ಭಾರತ
ಬೆಳಗಾವಿ: ಜಿಲ್ಲೆಯಲ್ಲಿ ಸುರಿಯುತ್ತಿರುವ ಮಹಾ ಮಳೆಗೆ ಹಲವಾರು ಗ್ರಾಮಗಳು ಜಲಾವೃತವಾಗಿದ್ದು, ಜಿಲ್ಲೆಯ ಲೋಳಸುರ ಗ್ರಾಮದಲ್ಲಿ ಮನೆ ಕುಸಿದು ಯುವತಿಯೊಬ್ಬಳು ಸಾವನ್ನಪ್ಪಿದ್ದಾಳೆ. ಪದ್ಮಾವತಿ ಪಾಟೀಲ್(21)ಮೃತ ದುರ್ದೈವಿ. ಘಟಪ್ರಭಾ ನದಿ ನೀರು ನುಗ್ಗಿ ಸಂಪೂರ್ಣ ಗ್ರಾಮ ಜಲಾವೃತಗೊಂಡಿದ್ದು, ಪರಿಣಾಮ ಮನೆ ಕುಸಿದು ಯುವತಿ ಸಾವನ್ನಪ್ಪಿದ್ದಾಳೆ. ಇದುವರೆಗೆ ಜಿಲ್ಲೆಯಲ್ಲಿ ಮಳೆಯಿಂದಾಗಿ ಒಟ್ಟು ಆರು ಜನರು ಸಾವನ್ನಪ್ಪಿದ್ದಾರೆ.